ಸ್ಪೋಟಕ ಬ್ರೇಕಿಂಗ್: ಇದ್ದಕ್ಕಿದ್ದ ಹಾಗೇ ರಮೇಶ್ ಜಾರಕಿಹೊಳಿಗೆ ಬೆಂಬಲ ಘೋಷಿಸಿದ ಶಾಸಕರು.! ನಡುಗಿದ ರಾಜ್ಯ ಸರ್ಕಾರ.?

ರಾಜ್ಯದಲ್ಲಿ ಒಂದು ಕಡೆ ಬಿಜೆಪಿ ಪಕ್ಷದ ಹೈಕಮಾಂಡ್ ಆಪರೇಷನ್ ಕಮಲ ನಡೆಯುತ್ತಿಲ್ಲ ಹಾಗೂ ನಡೆಸಬಾರದು ಎಂದು ಸ್ಪಷ್ಟ ಸಂದೇಶವನ್ನು ಬಿಜೆಪಿ ಪಕ್ಷದ ನಾಯಕರಿಗೆ ನೀಡಿದೆ. ಬಿಜೆಪಿ ಪಕ್ಷದ ನಾಯಕರು ಆಪರೇಷನ್ ಕಮಲಕ್ಕೆ ಇನ್ಯಾವುದೇ ಒತ್ತು ನೀಡುತ್ತಿಲ್ಲ ಎಂಬ ಮಾಹಿತಿಗಳು ಸಹ ಹೊರಬೀಳುತ್ತಿವೆ. ಆದರೆ ಇದೀಗ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವಿನ ಮೈತ್ರಿಯಿಂದ ಬಂಡಾಯವೆದ್ದಿರುವ ಶಾಸಕರಿಂದ ಸರ್ಕಾರ ಉರುಳಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದ್ದು ಆಸ್ಟ್ರೇಲಿಯಾದಿಂದ ಡಿಕೆ ಶಿವಕುಮಾರ್ ಅವರು ವಾಪಸಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಮೊದಲಿನಿಂದಲೂ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಪಡುತ್ತಿರುವ ರಮೇಶ್ ಜಾರಕಿಹೊಳಿ ರವರಿಗೆ ಇನ್ನಿಲ್ಲದ ಸವಾಲುಗಳು ಎದುರಾಗುತ್ತಿವೆ. ಹಲವಾರು ಶಾಸಕರ ಜೊತೆ ಮಾತುಕತೆ ನಡೆಸಿ ರಾಜ್ಯ ಸರ್ಕಾರವನ್ನು ಉರುಳಿಸಲು ರಾಜೀನಾಮೆ ನೀಡೋಣ ಎನ್ನುವಷ್ಟರಲ್ಲಿ, ರಮೇಶ್ ಜಾರಕಿಹೊಳಿ ರವರ ಯೋಜನೆಗಳು ಹಲವಾರು ಬಾರಿ ವಿಫಲವಾಗಿವೆ. ಕೆಲವೇ ಕೆಲವು ದಿನಗಳಲ್ಲಿ ಸಿಹಿ ಸುದ್ದಿ ಕೊಡುತ್ತೇನೆ ಎಂದು ಈಗಾಗಲೇ ಹಲವಾರು ಬಾರಿ ಹೇಳಿಕೆ ನೀಡಿರುವ ರಮೇಶ್ ಜಾರಕಿಹೊಳಿ ರವರಿಗೆ ತಮ್ಮ ಆಪ್ತರು ಹಲವಾರು ಬಾರಿ ಕೈ ನೀಡಿದ್ದಾರೆ. ಆದರೆ ಇದೀಗ ರಾಜ್ಯ ರಾಜಕಾರಣವನ್ನು ತಲ್ಲಣಗೊಳಿಸುವ ಸುದ್ದಿ ಹೊರಬಿದ್ದಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಮೇಶ್ ಜಾರಕಿಹೊಳಿ ರವರು ಗೋವಾ ರಾಜ್ಯದಲ್ಲಿ ಈಗಾಗಲೇ 30 ಬುಕ್ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಕರೆತಂದು ರಾಜೀನಾಮೆ ನೀಡಿ ರಾಜ್ಯ ಸರ್ಕಾರವನ್ನು ಉರುಳಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಬೇಕು ಎಂಬುದು ರಮೇಶ್ ಜಾರಕಿಹೊಳಿ ರವರ ಯೋಜನೆ. ಆದರೆ ಮೊದಲಿಗೆ ರಮೇಶ್ ಜಾರಕಿಹೊಳಿ ರವರಿಗೆ ಯಾವುದೇ ಶಾಸಕರ ಬೆಂಬಲ ದೊರೆತಿರಲಿಲ್ಲ. ಇದರಿಂದ ಸಾಮಾನ್ಯವಾಗಿ ರಮೇಶ್ ಜಾರಕಿಹೊಳಿ ಅವರು ಎಷ್ಟೇ ಪ್ರಯತ್ನಪಟ್ಟರು ರಾಜ್ಯ ಸರ್ಕಾರ ಉರುಳಿಸಲು ಸಾಧ್ಯವಾಗುವುದಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಆದರೆ ಇದೀಗ ರಮೇಶ್ ಜಾರಕಿಹೊಳಿ ಒಬ್ಬರೇ ಗೋವಾ ರಾಜ್ಯಕ್ಕೆ ತೆರಳಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ರಮೇಶ್ ಜಾರಕಿಹೊಳಿ ರವರ ಜೊತೆ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಹಾಗೂ ಜೆಡಿಎಸ್ ಕಾಂಗ್ರೆಸ್ ಪಕ್ಷದ ಬರೋಬ್ಬರಿ ಒಂಬತ್ತು ಶಾಸಕರು ಗೋವಾ ಖಾಸಗಿ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಗೋವಾದ ಪೋರ್ಟ್ ಆಗೊಡದಲ್ಲಿರುವ ಐಷಾರಾಮಿ ಪಂಚತಾರಾ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್-ಕಾಂಗ್ರೆಸ್ ಶಾಸಕರು 29ರ ವರೆಗೆ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿ, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಿ ನಂತರ ದೆಹಲಿಯ ಬಿಜೆಪಿ ಪಕ್ಷದ ಹೈಕಮಾಂಡ್ ನ ಜೊತೆ ಮಾತನಾಡಿ ಹಸಿರುನಿಶಾನೆ ದೊರೆಯುತ್ತಿದ್ದಂತೆ ರಾಜಿನಾಮೆ ನೀಡಲು ರಾಜ್ಯಕ್ಕೆ ವಾಪಸಾಗಲಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಒಟ್ಟಿನಲ್ಲಿ ಬಿಜೆಪಿ ಪಕ್ಷವು ಆಪರೇಷನ್ ಕಮಲ ಬೇಡ ಎಂದು ಕೈಬಿಟ್ಟರು ರಮೇಶ್ ಜಾರಕಿಹೊಳಿ ರವರು ಮಾತ್ರ ರಾಜ್ಯ ಸರಕಾರವನ್ನು ಉರುಳಿಸಿ ತೀರುತ್ತೇನೆ ಎಂಬ ಪಣ ತೊಟ್ಟಂತೆ ಕಾಣುತ್ತಿದೆ.

Comments

  1. As early as possible this govt should go.fresh mandate is fine.

    ReplyDelete

Post a Comment