ಪರಮಾಪ್ತ ಸ್ನೇಹಿತ ಇಸ್ರೇಲ್‌ನ ಜೊತೆಗೂಡಿ ಪಾಕಿಸ್ತಾನವನ್ನು ವಿಲವಿಲ ಒದ್ದಾಡಿಸಲು ಪ್ರಧಾನಿ ಮೋದಿ ಮಾಡಿದ್ದಾರೆ ಭರ್ಜರಿ ಪ್ಲ್ಯಾನ್!! ಈ ಪ್ಲ್ಯಾನ್ ಏನು ಅಂತ ಗೊತ್ತಾದರೆ ಸೆಲ್ಯೂಟ್ ಮಾಡುವಿರಿ
ಭಾರತಕ್ಕೂ ಇಸ್ರೇಲ್‌ಗೂ ಐತಿಹಾಸಿಕ ಸಂಬಂಧವಿದೆ ಎಂಬುದು ಈಗಾಗಲೇ ಬಹುತೇಕರಿಗೆ ಗೊತ್ತಿರಬಹುದು. ಇಸ್ಲಾಮಿಕ್ ದಾಳಿಕೋರರು, ಕ್ರಿಶ್ಚಿಯನ್ ದಾಳಿಕೋರರು ಮೂಲ ಇಸ್ರೇಲಿಗರ ಮೇಲೆ ದಾಳಿ ಮಾಡಿ ದೇಶಬಿಟ್ಟು ಓಡಿಸಿದಾಗ ನೆಲೆಯಿಲ್ಲದೇ ಇಸ್ರೇಲಿಗರು ಸಂಕಟದಲ್ಲಿದ್ದರು. ವಿಶ್ವದ ಯಾವ ದೇಶವೂ ಅವರ ಕಷ್ಟಕ್ಕೆ ಸ್ಪಂದಿಸಲಿಲ್ಲ. ದೇಶಾಂತರ ಅಲೆಮಾರಿಗಳಾಗಿ ಬದುಕುತ್ತಿದ್ದ ಅವರಿಗೆ ನೆಲೆ ಕಲ್ಪಿಸಿ ಭಾರತ ಪೋಷಿಸಿತು. ತನ್ನ ಮಕ್ಕಳಂತೆ ಭಾರತ ಮಾತೆ ಇಸ್ರೇಲಿಗರನ್ನು ಸ್ವೀಕರಿಸಿದಳು. ಇಸ್ರೇಲಿಗರು ಭಾರತದೊಂದಿಗೆ ಸಹೋದರರಂತೆ ಬೆರೆತು ಹೋದರು. ಇದು ಇತಿಹಾಸ ಘಟನೆ.
ಭಾರತದ ಈ ಋಣವನ್ನು ನಾವೆಂದಿಗೂ ತೀರಿಸೋಕಾಗೋದಿಲ್ಲವೆಂದು ಇಸ್ರೇಲ್ ಇತಿಹಾಸ ಕಾಲಘಟ್ಟದಿಂದ ಹಿಡಿದು ಇಂದಿನ ತನಕ ಭಾರತಕ್ಕೆ ಹೆಗಲು ಕೊಟ್ಟು ಸಹೋದರನಂತೆ ವರ್ತಿಸುತ್ತಾ ಬಂದಿದೆ. ಭಾರತದಲ್ಲಿ ನೆಲೆಯೂರಿದ್ದ ಹಾಗೂ ದೇಶಾದ್ಯಂತ ಹರಿದು ಹಂಚಿ ಹೋಗಿದ್ದ ಇಸ್ರೇಲಿಗರು ಪುನಃ ತಮ್ಮ ದೇಶಕ್ಕೆ ಹೋಗಿ ಕಟ್ಟುವ ಕೆಲಸವನ್ನು ಮಾಡಿದರು. ಈಗ ಇಸ್ರೇಲ್ ಜಗತ್ತಿನ ಯಾವ ರಾಷ್ಟ್ರಕ್ಕೂ ಮಣಿಯದ ರೀತಿಯಲ್ಲಿ ಬೆಳೆದು ನಿಂತಿದೆ. ಜಗತ್ತಿನ ಅತೀ ಪುಟ್ಟ ರಾಷ್ಟ್ರವಾದರೂ ಜಗತ್ತಿಗೆ ಹೆದರದ ರೀತಿಯಲ್ಲಿ ಬೆಳೆದಿದೆ.
ಈ ರೀತಿ ಬೆಳೆಯಲು ಕಾರಣ ಆ ದೇಶದ ಜನತೆಯ ದೇಶಪ್ರೇಮ. ಆ ದೇಶದಲ್ಲಿ ಪ್ರತಿಯೊಬ್ಬನು ದೇಶಪ್ರೇಮಿಯೇ. ಹಾಗೆಯೇ ಆ ದೇಶದಲ್ಲಿ ಪ್ರತಿಯೊಂದು ಮನೆಯಲ್ಲಿ ಸೈನಿಕರಿದ್ದಾರೆ. ಈ ಕಾರಣದಿಂದಲೇ ಇಸ್ರೇಲ್ ಹೆಮ್ಮರವಾಗಿ ಬೆಳೆದು ನಿಂತಿದೆ. ಐತಿಹಾಸಿಕ ಸಹೋದರತ್ವ ಸಂಬಂಧ ಇರುವ ಇಸ್ರೇಲ್ ಭಾರತದ ಸ್ನೇಹವನ್ನು ಬಯಸುತ್ತಲೇ ಬಂದಿತ್ತು. ಆದರೆ ಭಾರತ ಮಾತ್ರ ಇಸ್ರೇಲ್ ಕಡೆ ಒಲವನ್ನು ಬೆಳೆಸಿಕೊಂಡಿರಲಿಲ್ಲ. ಇಸ್ರೇಲ್ ರಾಷ್ಟ್ರ ತನ್ನ ಸುತ್ತ ಇರುವ ಮುಸ್ಲಿಂ ರಾಷ್ಟ್ರ ಹಾಗೂ ಕ್ರಿಶ್ಚಿಯನ್ ರಾಷ್ಟ್ರಗಳ ವಿರುದ್ಧ ತೊಡೆ ತಟ್ಟಿ ನಿಂತಿದೆ. ಇದೇ ಕಾರಣದಿಂದ ಭಾರತ ಇಸ್ರೇಲ್ ಜೊತೆ ಸ್ನೇಹ ಸಂಬಂಧ ಬೆಳೆಸಿದರೆ ಇಲ್ಲಿನ ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ ಕೋಪ ಬರುತ್ತೆ ಎನ್ನುವ ಕಾರಣದಿಂದಾಗಿ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಇಸ್ರೇಲ್‌ನ್ನು ದೂರವಿಟ್ಟಿದ್ದರು.
ಭಾರತವನ್ನು ಅತೀ ಹೆಚ್ಚು ಪ್ರೀತಿಸುವ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್. ಇದನ್ನು ಅರಿತ ಮೋದಿಯವರು ಐತಿಹಾಸ ಪರ್ವವೊಂದಕ್ಕೆ ಮುನ್ನುಡಿಯನ್ನು ಬರೆದರು. ಇಲ್ಲಿಯವರೆಗೆ ಭಾರತದ ಯಾವ ಪ್ರಧಾನಿಯೂ ಇಸ್ರೇಲ್‌ಗೆ ಬೇಟಿ ನೀಡಿರಲಿಲ್ಲ. ಇದನ್ನು ಬ್ರೇಕ್ ಮಾಡಿ ಪ್ರಧಾನಿ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡುವ ಮೂಲಕ ಪರಮಾಪ್ತ ಸ್ನೇಹಿತನ ಬಯಕೆಯನ್ನು ಈಡೇರಿಸಿದರು. ನಂತರ ಆದ ಘಟನೆಗಳು ಎಲ್ಲರಿಗೂ ಗೊತ್ತಿದೆ. ಮೋದಿ ಇಸ್ರೇಲಿಗೆ ಹೋಗಿಬಂದ ಕೆಲವೇ ದಿನಗಳಲ್ಲಿ ಇಸ್ರೇಲಿನ ಪ್ರಧಾನಿ ಭಾರತಕ್ಕೆ ಬಂದಿದ್ದರು. ಹೀಗೆ ಮತ್ತಷ್ಟು ಸ್ನೇಹ ವೃದ್ಧಿಯಾಗಿತ್ತು!!
ಈ ಸ್ನೇಹದಿಂದ ಇಸ್ರೇಲ್ ತನ್ನ ಕೈಚಳಕದಿಂದ ತಯಾರು ಮಾಡಿದ ಕ್ಷಿಪಣಿಗಳನ್ನು ಭಾರತಕ್ಕೆ ಕೊಡಲು ಒಪ್ಪಿಕೊಂಡಿದೆ. ಅಂದಹಾಗೆ ಇಸ್ತೇಲಿನ ಕೈಚಳಕ ಹೇಗಿದೆ ಅಂದ್ರೆ, ಅದು ಪುಟ್ಟ ರಾಷ್ಟ್ರವಾದರೂ ಇಡೀ ವಿಶ್ವವನ್ನು ನಡುಗಿಸುವಂತಹ ಸಾಮರ್ಥವನ್ನು ಹೊಂದಿದೆ. ಈ ಸಾಮರ್ಥ್ಯಕ್ಕೆ ಕಾರಣ ಇಸ್ರೇಲಿನ ಸೇನೆ ಮತ್ತು ಶಸ್ತ್ರಾಸ್ತ್ರಗಳು. ಇಂತಹ ಬಲಿಷ್ಠ ಸೇನೆಯನ್ನು ಹೊಂದಿದ ಭಾರತದ ಪರಮಾಪ್ತ ಎನಿಸಿಕೊಂಡ ಇಸ್ರೇಲ್ ಭಾರತಕ್ಕೆ ಕ್ಷಿಪಣಿಗಳನ್ನು ತಯಾರಿ ಮಾಡಿಕೊಡಲು ಮುಂದಾಗಿದೆ. ಈ ಕ್ಷಿಪಣಿ 70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಖಂಡಾಂತರ ಕ್ಷಿಪಣಿ, ಫೈಟರ್ ಜೆಟ್, ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿ ವ್ಯವಸ್ಥೆ ಸೇರ್ಪಡೆಯಾದರೆ ಭಾರತೀಯ ಸೇನೆಯ ಬಲ ಹೆಚ್ಚಲಿದೆ.
2020ರ ಹೊತ್ತಿಗೆ ಈ ವ್ಯವಸ್ಥೆ ಸಿದ್ದವಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್’ಡಿಒ) ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜತೆ ಸೇರಿ ಈ ತಂತ್ರಜ್ಞಾನವನ್ನು ಭಾರತೀಯ ಸೇನೆಯ ಬತ್ತಳಿಕೆ ಸೇರಿಸಲಿದೆ. ಹಾಗೆ ನೋಡಿದರೆ ಈ ತಂತ್ರಜ್ಞಾನ ಈಗಾಗಲೇ ವಾಯು ಸೇನೆ ಮತ್ತು ನೌಕಾ ಸೇನೆ ಬಳಿ ಇದೆ. ಇದೀಗ ಭೂ ಸೇನೆಗೂ ಈ ತಂತ್ರಜ್ಞಾನ ಹೊಂದಲಿದೆ. ‘ಮೀಡಿಯಂ ರೇಂಜ್ ಸರ್ಪೇಸ್ ಟು ಏರ್ ಮಿಸೈಲ್ ಸಿಸ್ಟಂ’ ಎಂದು ಕರೆಯಲಾಗುವ ಎಂಆರ್’ಎಸ್ಎಎಂ ಟ್ರಕ್ ನಂತಿರುವ ಸಂಚಾರಿ ಕ್ಷಿಪಣಿ ವ್ಯವಸ್ಥೆಯಾಗಿದೆ.
2020ರ ಹೊತ್ತಿಗೆ ಈ ವ್ಯವಸ್ಥೆ ಸಿದ್ದವಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್’ಡಿಒ) ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜತೆ ಸೇರಿ ಈ ತಂತ್ರಜ್ಞಾನವನ್ನು ಭಾರತೀಯ ಸೇನೆಯ ಬತ್ತಳಿಕೆ ಸೇರಿಸಲಿದೆ. ಹಾಗೆ ನೋಡಿದರೆ ಈ ತಂತ್ರಜ್ಞಾನ ಈಗಾಗಲೇ ವಾಯು ಸೇನೆ ಮತ್ತು ನೌಕಾ ಸೇನೆ ಬಳಿ ಇದೆ. ಇದೀಗ ಭೂ ಸೇನೆಗೂ ಈ ತಂತ್ರಜ್ಞಾನ ಹೊಂದಲಿದೆ. ‘ಮೀಡಿಯಂ ರೇಂಜ್ ಸರ್ಪೇಸ್ ಟು ಏರ್ ಮಿಸೈಲ್ ಸಿಸ್ಟಂ’ ಎಂದು ಕರೆಯಲಾಗುವ ಎಂಆರ್’ಎಸ್ಎಎಂ ಟ್ರಕ್ ನಂತಿರುವ ಸಂಚಾರಿ ಕ್ಷಿಪಣಿ ವ್ಯವಸ್ಥೆಯಾಗಿದೆ.
ಟ್ರಂಕ್ ನಿಂತಿರುವ ಜಾಗದಿಂದ 70 ಕಿಲೋಮೀಟರ್ ಸುತ್ತಳತೆಯಲ್ಲಿ 360 ಡಿಗ್ರಿಯಲ್ಲಿ ಕೋನದಲ್ಲಿ ಬರುವ ಶತ್ರುಗಳ ಕ್ಷಿಪಣಿ, ಫೈಟರ್ ಜೆಟ್, ಹೆಲಿಕಾಪ್ಟರ್, ಡ್ರೋನ್ ಮೊದಲಾದವನ್ನ ಹೊಡೆದುರುಳಿಸಲಿದೆ. ಈ ಕ್ಷಿಪಣಿ ವ್ಯವಸ್ಥೆಯನ್ನು ಪಡೆಯಲು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜತೆ ಡಿಆರ್’ಡಿಒ 17,000 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ. 40 ಕ್ಷಿಪಣಿ ಘಟಕಗಳು ಮತ್ತು 200 ಮಿಸೈಲ್ ಗಳನ್ನು ಪಡೆದುಕೊಳ್ಳುವ ಒಪ್ಪಂದ ಇದಾಗಿದ್ದು ಎರಡೂ ಸಂಸ್ಥೆಗಳು ಒಟ್ಟಾಗಿ ಇವನ್ನು ಅಭಿವೃದ್ಧಿಪಡಿಸಲಿವೆ.
ಇದಲ್ಲದೇ ಇಸ್ರೇಲ್ ಈಗ ಭಾರತದೊಂದಿಗೆ ಮತ್ತಷ್ಟು ಸ್ನೇಹ ಸಂಬಂಧವನ್ನು ವೃದ್ಧಿಗೊಳಿಸುವ ಸಲುವಾಗಿ ಇಸ್ರೇಲ್ ಭಾರತಕ್ಕೆ ರಾಯಬಾರಿಯನ್ನು ಸ್ವತಃ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಆಯ್ಕೆ ಮಾಡಿದ್ದಾರೆ. ಈ ಮೂಲಕ ಅವರು ಭಾರತಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆಂದು ಸಾಬೀತುಪಡಿಸಿದ್ದಾರೆ!!
ಇಸ್ರೇಲಿನ ಪ್ರಧಾನಿ ನೆತನ್ಯಾಹು ಅವರೇ ಖುದ್ದು ನಿಂತು ಭಾರತ ರಾಯಬಾರಿಯನ್ನು ಆಯ್ಕೆ ಮಾಡುವ ಮೂಲಕ ಭಾರತೀಯರಿಗೆ ಖುಷಿಯನ್ನುಂಟು ಮಾಡಿದ್ದಾರೆ. ಇಸ್ರೇಲಿನ ಪ್ರಧಾನಿಯ ಈ ನಿರ್ಧಾರದಿಂದ ಭಾರತದ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾಕ್ಕೆ ನಡುಕವನ್ನುಂಟು ಮಾಡಿದ್ದಾರೆ. ಈಗಾಗಲೇ ಭಾರತದ ಜೊತೆ ಶಸ್ತ್ರಾಸ್ತ್ರಗಳ ಕುರಿತಂತೆ ಕೈಜೋಡಿಸಿದ ಇಸ್ರೇಲ್ ಇದೀಗ ಮತ್ತಷ್ಟು ಸ್ನೇಹವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ!!
Comments
Post a Comment