ಹೊಸ ಅಧ್ಯಕ್ಷರ ಹುಡುಕಾಟದಲ್ಲಿ ಬಿಜೆಪಿ.! ಯಾರಗಲಿದ್ದಾರೆ ಕಮಲ ಪಾಲಯದ ಹೊಸ ಸಾರಥಿ.?

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಬಿಜೆಪಿ ದಾಖಲೆಯ ಸ್ಥಾನಗಳನ್ನು ಗಳಿಸಿದೆ. ಮುಂದಿನ 30ರಂದು ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಗಾಂಧಿ ನಗರದಲ್ಲಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ ಅಮಿತ್ ಶಾ ಮೊಟ್ಟ ಮೊದಲ ಬಾರಿಗೆ ಮೋದಿ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ನಡುವೆ ಬಿಜೆಪಿಗೆ ಹೊಸ ಅಧ್ಯಕ್ಶರ ಹುಡುಕಾಟ ಶುರುವಾಗಿದೆ. ಬಿಜೆಪಿಯ ಚಾಣಕ್ಯ ಎಂದೇ ಖ್ಯಾತಿ ಪಡೆದು ಸಾಲು ಸಾಲು ಗೆಲುವುಗಳನ್ನು ದೊರಕಿಸಿ ಕೊಟ್ಟ ಅಮಿತ್ ಶಾ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆಗಳು ಹುಟ್ಟಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುವವರು ಬಿಜೆಪಿ ಪಕ್ಷ ಹಾಗೂ ಅರ್ ಎಸ್ ಎಸ್ ನಡುವೆ ಸಮನ್ವಯತೆ ಸಾಧಿಸಲು ಅರ್ ಎಸ್ ಎಸ್ ಹಿನ್ನಲೆಯುಲ್ಲವರಾಗಿರಬೇಕೆಂಬುದು ವಾಡಿಕೆ. 

ಅರ್ ಎಸ್ ಎಸ್ ಕೂಡ ರಾಷ್ಟ್ರ‍ೀಯ ಅಧ್ಯಕ್ಷರ ಹುಡುಕಾಟದಲ್ಲಿದೆ ಸದ್ಯ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಣ್, ಜೆ ಪಿ ನಡ್ಡಾ ಹಾಗೂ ಧರ್ಮೇಂದ್ರ ಪ್ರಧಾನ ಹೆಸರು ಕೇಳಿ ಬರುತ್ತಿದೆ.

Comments