ಶಿವಸೇನೆ ಈ ರೀತಿಯಾಗಿ ಟೀಕಾಪ್ರಹಾರ ನಡೆಸುತ್ತಿದುದನ್ನು ಗಮನಿಸಿ ಬಿಜೆಪಿಯ ಚಾಣಕ್ಯ ಇತ್ತೀಚೆಗೆ ಶಿವಸೇನೆಗೆ ಖಡಕ್ ಸಂದೇಶವನ್ನು ಕೂಡ ರವಾನಿಸಿದ್ದರು. ಈ ಎಲ್ಲಾದರ ನಡುವೆ ಶಿವಸೇನೆ ಎಂದಿನಂತೆ ಬಿಜೆಪಿ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಮುಂದಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸಸ್ ಬಗೆಹರಿಸಿಕೊಳ್ಳುತ್ತಿದ್ದರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗುತ್ತಿವೆ.
‘ಕಾಂಗ್ರೆಸ್ ಮತ್ತು ಎನ್‌ಸಿಪಿ ರಾಜ್ಯದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿದರೆ ನಾವು ಏಕಾಂಗಿಯಾಗಿ ಸ್ಪರ್ಧಿಸಿದರೆ ಸಮಸ್ಯೆ ಉಂಟಾಗದು. ಆದರೆ, ನಾವು ಪ್ರತ್ಯೇಕವಾಗಿ ಕಣಕ್ಕಿಳಿದರೆ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಅಧಿಕಾರಕ್ಕೆ ಬರಲಿದೆ ಎನ್ನುವುದು ಶಿವಸೇನಾಗೂ ತಿಳಿದಿದೆ. ಹೀಗಾಗಿ ಮೈತ್ರಿಯನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದು’ ಎಂದು ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
Comments
Post a Comment