ಕೊನೆ ಕ್ಷಣದಲ್ಲಿ ರಾಜ್ಯಸಭೆಗೆ ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಘಟಕಕ್ಕೆ ಕೇಂದ್ರ ವರಿಷ್ಠರು ಲಾಬಿ ಹಾಗೂ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ಕಠಿಣ ಸಂದೇಶ ರವಾನಿಸಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಇತ್ತೀಚೆಗೆ ಪ್ರತ್ಯೇಕ ಸಭೆ ನಡೆಸಿ ತಮ್ಮನ್ನು ಪರೋಕ್ಷವಾಗಿ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಒತ್ತಡದ ತಂತ್ರ ಹಾಕಿದ್ದರು.
ನಂ. 1 ವಶೀಕರಣದ ಮಹಾಮಾಂತ್ರಿಕ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ
ಕೇರಳದ ಭಗವತಿ ಪೂಜಾ ಪದ್ದತಿಯಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಮದುವೆ, ಸಂತಾನ, ವ್ಯಾಪಾರ, ವಿದೇಶಿ ಪ್ರವಾಸ, ಶತ್ರು ಕಾಟ ಹಾಗೂ ನಿಮ್ಮ ಜೀವನದ ಯಾವುದೇ ನಿಗೂಢ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಕೂಡಲೇ ಸಂಪರ್ಕಿಸಿ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ9663206650
ಸಂಪುಟಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ರಮೇಶ್ ಕತ್ತಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ವರಿಷ್ಠರ ಮೇಲೆ ಒತ್ತಡದ ತಂತ್ರ ಅನುಸರಿಸಿದ್ದರು. ಆದರೆ ವರಿಷ್ಠರು ಯಾವ ಬ್ಲಾಕ್‍ಮೇಲ್‍ಗೂ ನಾವು ಮಣಿಯುವುದಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಯಾರಿಗೂ ಅಸಮಾಧಾನವಾಗದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಕೇಂದ್ರ ನಾಯಕರು ಸಮತೋಲನದ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ.
ಹಾಗೆ ನೋಡಿದರೆ ರಾಜ್ಯಸಭೆಗೆ ಇಂದು ಘೋಷಣೆ ಮಾಡಿರುವ ಈ ಇಬ್ಬರು ಹೆಸರುಗಳು ಎಲ್ಲಿಯೂ ಕೇಳಿಬಂದಿರಲಿಲ್ಲ. ಒಬ್ಬೊಬ್ಬ ನಾಯಕರು ತಮ್ಮ ತಮ್ಮ ಹಿಂಬಾಲಕರಿಗೆ ಮೇಲ್ಮನೆಯಲ್ಲಿ ಸ್ಥಾನ ಗಿಟ್ಟಿಸಲು ಪರೋಕ್ಷವಾಗಿ ಲಾಬಿ ನಡೆಸಿದ್ದರು.
ಆದರೆ ಕೇಂದ್ರದಲ್ಲಿ ಅಮಿತ್ ಷಾ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದು, ಒತ್ತಡ, ಜಾತಿ, ಲಾಬಿಗೆ ಸೊಪ್ಪ ಹಾಕದೆ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನವೆಂದರೆ ಇಂದು ರಾಜ್ಯಸಭೆಗೆ ಆಯ್ಕೆಯಾಗಿರುವ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರ ಹೆಸರುಗಳೇ ಉದಾಹರಣೆಯಾಗಿದೆ.
ನಂ. 1 ವಶೀಕರಣದ ಮಹಾಮಾಂತ್ರಿಕ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ
ಕೇರಳದ ಭಗವತಿ ಪೂಜಾ ಪದ್ದತಿಯಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಮದುವೆ, ಸಂತಾನ, ವ್ಯಾಪಾರ, ವಿದೇಶಿ ಪ್ರವಾಸ, ಶತ್ರು ಕಾಟ ಹಾಗೂ ನಿಮ್ಮ ಜೀವನದ ಯಾವುದೇ ನಿಗೂಢ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಕೂಡಲೇ ಸಂಪರ್ಕಿಸಿ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ9663206650
ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಬೇಕೆಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿತ್ತು. ಇದೀಗ ಮೂರನೇ ಬಾರಿಗೆ ಅವಕಾಶ ಕೈತಪ್ಪಿರುವ ಪ್ರಭಾಕರ್ ಕೋರೆ, ಪ್ರಬಲ ಆಕಾಂಕ್ಷಿಗಳಾಗಿದ್ದ ರಮೇಶ್ ಕತ್ತಿ, ನಿರ್ಮಲ್‍ಕುಮಾರ್ ಸುರಾನ, ವಿಜಯ್ ಸಂಕೇಶ್ವರ್ ಸೇರಿದಂತೆ ಯಾರೊಬ್ಬರೂ ಅಪಸ್ವರ ತೆಗೆಯುವ ಸ್ಥಿತಿಯಲ್ಲಿಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಂತಹ ಪ್ರಬಲ ನಾಯಕತ್ವ ಇರುವುದರಿಂದ ವರಿಷ್ಠರ ತೀರ್ಮಾನಕ್ಕೆ ಸೆಡ್ಡು ಒಡೆಯುವ ಸಾಧ್ಯತೆ ಕಡಿಮೆ.
ಈ ಬೆಳವಣಿಗೆಯಿಂದ ವರಿಷ್ಠರು ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತದೆ. ನಮ್ಮ ನಿರ್ಧಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬ ಬಿಸಿ ಮುಟ್ಟಿಸಿದ್ದಾರೆ. ಸಹೋದರನಿಗೆ ಟಿಕೆಟ್ ಕೈ ತಪ್ಪಿರುವುದರಿಂದ ಉಮೇಶ್ ಕತ್ತಿಯಾಗಲಿ ಅಥವಾ ಬೇರೆ ಇನ್ಯಾರು ಕೂಡ ಭಿನ್ನಮತ ಹಿಡಿಯದಂತಹ ಪರಿಸ್ಥಿತಿ
Comments
Post a Comment