ಕಾಂಗ್ರೆಸ್ ಗೆ ಭರ್ಜರಿ ಗುಡ್ ನ್ಯೂಸ್, ರಾಜ್ಯ ಬಿಜೆಪಿಯ ಪ್ರಭಾವಿ ನಾಯಕರು ಕಾಂಗ್ರೆಸ್ ಗೆ.?

ರಾಜ್ಯ ಸಭೆಗೆ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿರುವ ಹೈಕಮಾಂಡ್ ಕ್ರಮದಿಂದ ಕತ್ತಿ ಸಹೋದರರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ, ರಾಜ್ಯಸಭೆ ಟಿಕೆಟ್ ಅಥವಾ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಡ ಹೇರಿದ್ದರು. ಸದ್ಯ ಎರಡರಲ್ಲೂ ಅವಕಾಶ ಸಿಗದ ಕಾರಣ ಕತ್ತಿ ಬಣ ಮತ್ತಷ್ಟು ಸಿಟ್ಟಿಗೆದ್ದಿದೆ. ತಮ್ಮ ಒಳಬೇಗುದಿಯನ್ನು ಮರೆ ಮಾಚಿದ್ದ ರಮೇಶ್ ಕತ್ತಿ ಮಂಗಳವಾರ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಒಂದು ವೇಳೆ ತಮ್ಮ ಸಹೋದರನಿಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೇ ರಾಜಕೀಯದಲ್ಲಿ ಮತ್ತೊಂದು ಮೆಗಾ ಟ್ವೀಸ್ಟ್ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments