ಬಿಗ್ ಬ್ರೇಕಿಂಗ್: `ಕೊರೊನಾ ಭೀತಿ' ಬಡಜನತೆಗೆ ಬಂಪರ್ ಕೊಡುಗೆ ಘೋಷಿಸಿದ ಸರ್ಕಾರ

ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರು ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಬಡಜನತೆಗೆ ಬಂಪರ್ ಕೊಡುಗೆ ಘೋಷಿಸಿದ್ದು, ಬಡವರಿಗೆ ಉಚಿತ ರೇಷನ್ ಮತ್ತು ಒಂದು ಕುಟುಂಬಕ್ಕೆ 1000 ರೂ. ಅನ್ನು ಕರೊನಾ ವೈರಸ್ ನಿಂದ ಉಂಟಾಗಿರುವ ಲಾಕ್ ಡೌನ್ ತೆರವು ಆಗುವವರೆಗೂ ನೀಡುವುದಾಗಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ಅಂತಾರಾಜ್ಯ ಸಾರಿಗೆ ವ್ಯವಸ್ಥೆಯನ್ನು ಮಾರ್ಚ್ 31 ರವರೆಗೆ ನಿರ್ಬಂಧಿಸಲಾಗಿದೆ. ಅಲ್ಲದೆ ಮನೆಯಿಂದ ಹೊರಬರಬೇಡಿ,ಅಗತ್ಯವಿದ್ದಲ್ಲಿ ಮಾತ್ರ ಹೊರ ಬನ್ನಿ ಎಂದು ಜನತೆಯಲ್ಲಿ ಜಗನ್ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಬಡವರಿಗೆ ಉಚಿತ ರೇಷನ್ ಮತ್ತು ಒಂದು ಕುಟುಂಬಕ್ಕೆ 1000 ರೂ. ಅನ್ನು ಕೊರೊನಾ ವೈರಸ್ ಲಾಕ್ ಡೌನ್ ತೆರವು ಆಗುವವರೆಗೂ ನೀಡುವುದಾಗಿ ಘೋಷಿಸಿದ್ದಾರೆ.

Comments