ಸ್ಪೋಟಕ ಬ್ರೇಕಿಂಗ್: ಮುಂದಿನ ದಿನಗಳಲ್ಲಿ ನಾನು ಈ ರಾಜ್ಯದ ಮ್ಯುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ ಪ್ರಭಾವಿ ಬಿಜೆಪಿ ನಾಯಕ.?

ಜನರ ಆಶೀರ್ವಾದ ಇದ್ದರೆ ನಾನೂ ಒಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಶಾಸಕ ಉಮೇಶ್ ಕತ್ತಿ ಮತ್ತೊಮ್ಮೆ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ನನಗೆ ಈಗ 60 ವರ್ಷ, ಇನ್ನೂ 20 ವರ್ಷ ರಾಜಕಾರಣ ಮಾಡುವೆ. ಈ ಅವಧಿಯಲ್ಲಿ ಮುಖ್ಯಮಂತ್ರಿ ಆಗುವುದು ಖಚಿತ. ಬಿಜೆಪಿಯಲ್ಲಿ 75 ನೇ ವರ್ಷದವರೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. 80 ನೇ ವರ್ಷದವರೆಗೂ ಅವಕಾಶ ನೀಡಿದರೆ ಇದೇ ಪಕ್ಷದಲ್ಲಿ ಇರುತ್ತೇನೆ ಎಂದರು.

ಇನ್ನು ಪಕ್ಷಕ್ಕೆ ವಲಸೆ ಬಂದವರಿಗೆ ಅವಕಾಶ ಮಾಡಿಕೊಡಲು ಮುಖ್ಯಮಂತ್ರಿಗಳು ಅಳೆದು ತೂಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಇದರಲ್ಲೇನೂ ವಿಶೇಷವಿಲ್ಲ ಎಂದರು.

Comments