ಇದೀಗ ಬಂದ ಸುದ್ದಿ: ಬಿ ವೈ ವಿಜಯೇಂದ್ರ ಬಹಿರಂಗ ಸವಾಲು ಹಾಕಿದ ಜೆಡಿಎಸ್ ನ ಪ್ರಭಾವಿ ಶಾಸಕ, ಬೆಚ್ಚಿಬಿದ್ದ ರಾಜ್ಯ ರಾಜಕೀಯ.?
















ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ಚುಂಚಗಿರಿ ಶ್ರೀಗಳ ಪೋನ್ ಕದ್ದಾಲಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಹೆಸರನ್ನು ಅನಗತ್ಯವಾಗಿ ಎಳೆತಂದಿದ್ದಕ್ಕೆ, ಜೆಡಿಎಸ್ ನ ಅನೇಕ ಮುಖಂಡರು ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ. ಅದರಲ್ಲೂ ನೇರವಾಗೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಫೇಸ್ ಬುಕ್ ನಲ್ಲಿ ಹರಿಹಾಯ್ದಿರುವ ಜೆಡಿಎಸ್ ನ ಮಾಧ್ಯಮ ಸಂಚಾಲಕ ಕೆ.ಸಿ.ಸದಾನಂದ, ವಿಜಯೇಂದ್ರ ತಾಕತ್ತಿದರೆ ಎಚ್.ಡಿ.ಕೆ ವಿರುದ್ಧ ನಿಮ್ಮಪ್ಪನಿಂದ ಟ್ವೀಟ್ ಮಾಡಿಸಿ ನೋಡೋಣ ಎಂದು ಸಾವಲ್ ಹಾಕಿದ್ದಾರೆ.


ಮುಖ್ಯಮಂತ್ರಿಯವರ ಸುಪುತ್ರ ಬಿವೈ ವಿಜಯೇಂದ್ರ ಅವರು ಈಗ ಅಂದರೆ ಅವರಪ್ಪ ಮುಖ್ಯಮಂತ್ರಿಯಾದ ಮೇಲೆ ತುಂಬಾ active ಆಗಿ ಬಿಟ್ಟಿದ್ದಾರೆ. ಅವರ ದಂಧೆಗಳು ನನಗೆ ಗೊತ್ತಿವೆ. ಅನೇಕರಿಗೆ ಗೊತ್ತಿದ್ದಂತೆ. ವಿಜಯೇಂದ್ರ ಈಗ ಟ್ವಿಟ್ಟರಲ್ಲಿ ಆನೆ ಹೋಗುವಾಗ ನಾಯಿ ಬೊಗಳಿದಂತೆ ಕುಮಾರಸ್ವಾಮಿಯವರನ್ನು ಟೀಕಿಸ ತೊಡಗಿದ್ದಾರೆ.

ಅದು ದೊಡ್ಡವರನ್ನು ಎದುರುಹಾಕಿಕೊಂಡು ಸುಖ ಸುಮ್ಮನೆ ಟೀಕಿಸಿ ಬೆಳೆಯುವ ವಾಂಚೆ. ಇದೆಲ್ಲವೂ ನಮ್ಮಂಥವರಿಗೆ ಸುಲಭವಾಗಿ ಅರ್ಥವಾಗುತ್ತದೆ. ನೀವು ಯಾಕೆ ದೊಡ್ಡವರನ್ನು ಎದುರುಹಾಕಿಕೊಂಡು ಟ್ವೀಟ್ ಮಾಡುತ್ತೀರಿ? ನಿನಗೆ ತಾಕತ್ತಿದ್ದರೆ ಮತ್ತು ಗಾಂಭೀರ್ಯ ಇದ್ದರೆ ನಿಮ್ಮಪ್ಪನ ಕೈಯಲ್ಲಿ ಇಂತಹ ಟ್ವೀಟ್ ಗಳನ್ನು ಮಾಡಿಸಿ ನೋಡೋಣ.

ದೊಡ್ಡವರ ಎದುರು ನೀವು ಸಣ್ಣ ಟೀಕೆಗಳನ್ನು ಮಾಡಿ ದೊಡ್ಡವರಾಗಲಯ ಸಾಧ್ಯವೇ ಇಲ್ಲ. ದೊಡ್ಡವರ ಹೊಟ್ಟೆಯಲ್ಲಿ ಹುಟ್ಟಿದವರಿಗೆ ಕನಿಷ್ಠ ಜ್ಞಾನ ಇರಬೇಕು.ಒಕ್ಕಲಿಗ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನನ್ನು ಕದ್ದಾಲಿಸಿಲಾಗುತ್ತಿದೆ.ಅದನ್ನು ನೀವು ಕಿವಿಯಾರೆ ಕೇಳಿದ್ದೀರಿ ಎಂಬಂತೆ ಕುಮಾರಸ್ವಾಮಿ ವಿರುದ್ಧ ಬಾಲಿಶ ಟ್ವೀಟ್ ಮಾಡುವ ನಿಮಗೆ ಯಾವ ನೈತಿಕತೆ ಇದೆ.

ವರ್ಗಾವಣೆ ದಂಧೆಯಲ್ಲಿ ನಿಮ್ಮದು ಎಷ್ಟು ಪಾತ್ರ ಇದೆ ಎಂಬುದನ್ನು ಬೇರೆ ಯಾರಾದರೂ ಹೇಳ ಬೇಕೆ? ಅಘೋಷಿತ ಮುಖ್ಯಮಂತ್ರಿಯಂತೆ ವರ್ತಿಸುತ್ತಿರುವ ನಿಮಗೆ ಇತ್ತೀಚಿಗೆ ಬಿಜೆಪಿ ಹೈಕಮಾಂಡ್ ನಿಂದ ಕಡಿವಾಣ ಹಾಕಲಾಗುತ್ತಿದೆ. ಅದು ನನಗೆ ಗೊತ್ತು. ನಿಮ್ಮಪ್ಪನಿಗೆ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಇದ್ದ ಸ್ವಾತಂತ್ರ್ಯ ಈಗ ಇಲ್ಲ. ಅದು ಈ ನಾಡಿಗೆ ಗೊತ್ತಿದೆ.

ನಮ್ಮಪ್ಪ ದೊಡ್ಡವರು. ನಾನು ದೊಡ್ಡ ಮನುಷ್ಯ ಎಂದುಕೊಂಡರೆ ಅದು ಅವಿವೇಕತನ. ಅಪ್ಪನದು ಹೋರಾಟ. ನಿಮ್ಮದು ಟ್ವಿಟರ್ ನ ಕಿರುಚಾಟ. Sorry to say this. ವ್ಯರ್ಥ ಪ್ರಲಾಪಗಳನ್ನು ಮಾಡಬೇಡಿ. ದೊಡ್ಡವರ ತಂಟೆಗೆ ಬಂದರೆ ಅದು ಗಾಳಿ ಗುದ್ದಾಟ. ನೆನಪಿರಲಿ.



Comments