ಇದೀಗ ಬಂದ ಸುದ್ದಿ: ವಿಕ್ರಂ ಲ್ಯಾಂಡರ್ ಬಗ್ಗೆ ಮತ್ತೊಂದು ಸ್ಪೋಟಕ ಮಾಹಿತಿ ಹೊರ ಹಾಕಿದ ಇಸ್ರ‍ೋ ಅಧ್ಯಕ್ಷ ಕೆ ಶಿವನ್.!

ಭಾರತೀಯಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇದ್ದ ಕೊನೆಯ ಅವಕಾಶವೂ ಕೈತಪ್ಪಿದ್ದು, ಸಂಪರ್ಕ ವಿಫಲವಾಗಿದೆ. ಇಸ್ರೋ ಅಧ್ಯಕ್ಷ ಕೆ.ಶಿವನ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಗಗನ್ ಯಾನ್ ಇಸ್ರೋ ಮುಂದಿನ ಆದ್ಯತೆಯಾಗಿದ್ದು, 2020ರ ವೇಳೆಗೆ ಮತ್ತೊಂದು ಚಂದ್ರಯಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆರ್ಬಿಟರ್ ನಲ್ಲಿ 8 ಉಪಕರಗಳಿವೆ, ಪ್ರತಿಯೊಂದೂ ಉಪಕರಣಗಳು ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿವೆ. ಲ್ಯಾಂಡರ್ ಜೊತೆ ಸಂಪರ್ಕ ಸಾಧ್ಯವಾಗಿಲ್ಲ, ನಮ್ಮ ಮುಂದಿನ ಗುರಿ ಎಂದು ಹೇಳಿದ್ದಾರೆ.

Comments