ಸೂರ್ಯ ರವರಿಗೆ ಮಹತ್ವದ ಹುದ್ದೆ ನೀಡಿದ ಮೋದಿ, ಶಾ.! ಇಡೀ ಭಾರತದಲ್ಲಿ ಇನ್ನು ಶುರು ತೇಜಸ್ವಿ ಹವಾ

ಇದೇ ಮೊಟ್ಟಮೊದಲ ಬಾರಿಗೆ ಚುನಾವಣೆಯನ್ನು ಎದುರಿಸಿ ಭರ್ಜರಿಯಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಹರಿ ಪ್ರಸಾದ್ ರವರನ್ನು ಚುನಾವಣೆಯಲ್ಲಿ ಸೋಲಿಸಿ, ಮೊಟ್ಟಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿರುವ ತೇಜಸ್ವಿ ಸೂರ್ಯ ರವರು ಇದೀಗ ಹಲವಾರು ವಿಷಯಗಳಲ್ಲಿ ದೇಶದ ಗಮನ ಸೆಳೆದಿದ್ದಾರೆ. ಮೊದಲಿನಿಂದಲೂ ತಮ್ಮ ನಿಲುವನ್ನು ಸ್ಪಷ್ಟವಾಗಿ ಜನರ ಮುಂದೆ ಯಾವುದೇ ಅಂಜಿಕೆಯಿಲ್ಲದೆ ಪ್ರಸ್ತಾವನೆ ಮಾಡಿ ಪ್ರಸಿದ್ಧಿ ಪಡೆದು ಕೊಂಡಿರುವ ತೇಜಸ್ವಿ ಸೂರ್ಯ ಅವರು ಸಂಸತ್ತಿನಲ್ಲಿ ಕರ್ನಾಟಕ ರಾಜ್ಯದ ಬ್ಯಾಂಕಿನ ಉದ್ಯೋಗಗಳ ಕುರಿತು ಹಾಗೂ ಇನ್ನಿತರ ಕರ್ನಾಟಕದ ಸಮಸ್ಯೆಗಳ ಕುರಿತು ಧ್ವನಿ ಎತ್ತಿ ಎಲ್ಲರ ಗಮನ ಸೆಳೆದಿದ್ದರು.

ಸ್ಪಷ್ಟವಾದ ಕನ್ನಡ ಹಾಗೂ ಆಂಗ್ಲ ಭಾಷೆ ಮಾತನಾಡುವ ತೇಜಸ್ವಿಸೂರ್ಯ ರವರು ದೆಹಲಿಯ ಮಾಧ್ಯಮಗಳಿಗೆ ಅಷ್ಟೇ ಅಚ್ಚು ಮೆಚ್ಚು, ಕಳೆದ ದಶಕಗಳಿಂದ ದೆಹಲಿ ಮಾಧ್ಯಮಗಳು ದಕ್ಷಿಣ ಭಾರತದಿಂದ ಸ್ಪಷ್ಟವಾಗಿ ಇಂಗ್ಲೀಷ್ ಮಾತನಾಡಬಲ್ಲ ಸಂಸದರಿಗಾಗಿ ಕಾದುಕುಳಿತಿದ್ದರು. ಹೀಗಾಗಿ  ತೇಜಸ್ವಿಸೂರ್ಯ ದೆಹಲಿ ಮಾಧ್ಯಮಗಳ ಕಣ್ಣಿಗೆ ಬಿದ್ದ ತಕ್ಷಣ , ಮಾಧ್ಯಮಗಳಿಗೆ ಅಚ್ಚು ಮೆಚ್ಚಿನ ಸಾಲಿನಲ್ಲಿ ನಿಂತಿದ್ದಾರೆ. ಇಷ್ಟೆಲ್ಲಾ ಪ್ರಸಿದ್ಧಿ ಪಡೆದು ಕೊಂಡಿರುವ ಕರ್ನಾಟಕ ರಾಜ್ಯದ ಯುವ ಸಂಸದ ತೇಜಸ್ವಿ ಸೂರ್ಯ ರವರಿಗೆ ಇದೀಗ ಮೋದಿ ನೇತೃತ್ವದ ಸರ್ಕಾರದ ಕಡೆಯಿಂದ ಮಹತ್ವದ ಹುದ್ದೆ ನೀಡಲಾಗಿದೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಬಿಜೆಪಿ ಪಕ್ಷದ ದಶಕಗಳ ಕನಸಾದ ಜಮ್ಮು ಹಾಗೂ ಕಾಶ್ಮೀರ ಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ನಿರ್ಧಾರ ಈಗಾಗಲೇ ಕೈಗೊಂಡಿದ್ದಾಗಿದೆ. ಆದರೆ ವಿರೋಧ ಪಕ್ಷದ ನಾಯಕರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದ ಕಾರಣಕ್ಕಾಗಿ ಇದನ್ನು ಮುಸ್ಲಿಮರ ವಿರುದ್ಧ ತೆಗೆದುಕೊಂಡ ನಿರ್ಧಾರ ಹಾಗೂ ದೇಶದಲ್ಲಿ ಶಾಂತಿ ಕದಡಲು ಈ ರೀತಿಯ ನಿರ್ಧಾರಗಳು ತೆಗೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಮೇಲೆ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ. ಇದರ ಮಹತ್ವವನ್ನು ಕೆಳ ಮಟ್ಟದ ಜನರಿಗೆ ತಲುಪಿಸುವುದು ಬಹಳ ಮುಖ್ಯ ಕರವಾದ ಕೆಲಸ. ಇದೇ ಕಾರಣಕ್ಕಾಗಿ ಇದೀಗ ಬಿಜೆಪಿ ಪಕ್ಷವು ಇಡೀ ದೇಶಾದ್ಯಂತ ಜನ ಜಾಗರಣ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಿದೆ.

ಒಟ್ಟು 35 ಬೃಹತ್ ನಗರಗಳು ಹಾಗೂ 370 ಸಣ್ಣ ಪಂಚಾಯತ್ ಪಟ್ಟಣಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಕೇಂದ್ರ ಸಚಿವರು ಹಾಗೂ ಕೆಲವು ಸಭೆಗಳಲ್ಲಿ ಅಮಿತ್ ಶಾ ರವರು ಭಾಗಿಯಾಗಲಿದ್ದಾರೆ. ವಿಶೇಷ ಸ್ಥಾನಮಾನ ರದ್ಧತಿಯ ಕ್ರಮದ ಬಗ್ಗೆ ಜನ ಸಾಮಾನ್ಯರಿಗೆ ಸಭೆಗಳ ಮೂಲಕ ಸ್ಪಷ್ಟವಾದ ಮಾಹಿತಿ ನೀಡಲು ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿಯಲ್ಲಿ ಕರ್ನಾಟಕದಿಂದ ಏಕೈಕ ಸಂಸದನಾಗಿ ಸ್ಥಾನ ಪಡೆದುಕೊಂಡಿದ್ದಾರೆ ತೇಜಸ್ವಿ ಸೂರ್ಯ. ಈ ಮೂಲಕ ಇಡೀ ದೇಶದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ತೇಜಸ್ವಿಸೂರ್ಯ ರವರು ಜನರಿಗೆ ವಿಶೇಷ ಸ್ಥಾನಮಾನ ರದ್ಧತಿಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.

Comments