ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದವರಲ್ಲಿ ರೆಡ್ಡಿ ಕೂಡ ಪ್ರಮುಖರು. ಕರ್ನಾಟಕದಲ್ಲಿ ರಚನೆಯಾದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಇವರು ಬಳಿಕ ನಾನಾ ಕಾರಣಗಳಿಂದ ರಾಜಕೀಯದಿಂದ ದೂರ ಉಳಿದು ಪಕ್ಷದಿಂದಲೇ ದೂರ ಉಳಿಯುವಂತಾಯ್ತು.
ಕರ್ನಾಟಕದ ರಾಜಕೀಯಕ್ಕೆ ರೆಡ್ಡಿಯವರ ರೀ ಎಂಟ್ರಿಯಾಗಬೇಕು ಎಂಬುದು ಬಿಜೆಪಿ ಬೆಂಬಲಿಗರ ಒತ್ತಾಯವಾಗಿದೆ. ಈ ಎಲ್ಲಾದರ ನಡುವೆ ರೆಡ್ಡಿ ಮತ್ತೆ ಬಿಜೆಪಿ ಸೇರಲಿದ್ದಾರ ಎಂಬುದು ಯಕ್ಷ ಪ್ರಶ್ನೆ. ರೆಡ್ಡಿ ರಾಜಕೀಯಕ್ಕೆ ಎಂಟ್ರಿಯಾಗಬೇಕೆಂದು ಕಳೆದ ವಾರ ಬಿಜೆಪಿ ಶಾಸಕರೊಬ್ಬರು ಒತ್ತಾಯಿಸಿದ್ದರು. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದು ಕಾದು ನೋಡಬೇಕಿದೆ.
Comments
Post a Comment