ಅಂತೂ ಇಂತು 14 ತಿಂಗಳುಗಳ ಕಾಲ ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ್ದ ಕೆಆರ್ ರಮೇಶ್ ಕುಮಾರ್ ತಮ್ಮ ಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊರ ನಡೆದಿದ್ದಾರೆ. ಈಗ ಆ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ..? ಯಾರು ಯಾರು ಮುಂಚೂಣಿಯಲ್ಲಿದ್ದಾರೆ ಆ ಸ್ಥಾನವನ್ನು ಅಲಂಕರಿಸಲು ಎಂಬುದೇ ಬಿಜೆಪಿಯಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆಯಾಗಿದೆ. ಹಾಗಾದರೇ ಯಾರು ಅಲಂಕರಿಸಬಹು..? ಯಾರ ಹೆಸರು ಮುಂಚೂಣಿಯಲ್ಲಿವೆ ಎಂಬ ಬಗ್ಗೆ ಮುಂದೆ ಓದಿ..
ರಾಜೀನಾಮೆ ನೀಡಿದ್ದ 17 ಶಾಸಕರನ್ನು ತಮ್ಮ ಕಾನೂನು ವ್ಯಾಪ್ತಿಯಲ್ಲಿ ಚರ್ಚೆ ನಡೆಸಿ, ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸುವ ಮೂಲಕ, ಬಿಜೆಪಿ ಪಕ್ಷದ ಟೀಕೆಗೆ ಗುರಿಯಾಗಿದ್ದರು. ಈ ಬೆಳವಣಿಗೆಯ ನಡುವೆಯೂ ಇಂದು ಮಹತ್ವದ ಹಣಕಾಸು ವಿಧೇಯಕ ಹಾಗೂ ವಿಶ್ವಾಸಮತ ಕಾರ್ಯನಡೆಸಿದ ರಮೇಶ್ ಕುಮಾರ್, ತಾವಾಗಿಯೇ 14 ತಿಂಗಳ ಸಭಾಧ್ಯಕ್ಷರ ಸ್ಥಾನ ತೃಪ್ತಿ ತಂದಿದೆ. ನನಗೆ ನೀಡಿದ್ದ ಜವಾಬ್ದಾರಿಯುತ ಸ್ಥಾನವನ್ನು ಗೌರವದಿಂದ ಮುನ್ನೆಡೆಸಿದ್ದೇನೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸುವ ಮೂಲಕ, ಉಪ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿ, ತೆರಳಿದ್ದಾರೆ.
ಇದೀಗ ಸ್ಪೀಕರ್ ರಮೇಶ್ ಕುಮಾರ್ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತ್ರ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ಮುಂದಿನ ಸ್ಪೀಕರ್ ಅನ್ನಾಗಿ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಜವಾಬ್ದಾರಿ ಬಿದ್ದಿದೆ. ಹೀಗಾಗಿ ಎರಡೂ ಪಕ್ಷದ ನಾಯಕರನ್ನು ಬ್ಯಾಲೆನ್ಸ್ ಮಾಡುತ್ತಾ, ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು ಸಹಕಾರಿಯಾಗುವಂತ ಸ್ಪೀಕರ್ ಆಯ್ಕೆಯಲ್ಲಿ ಸಿಎಂ ಯಡಿಯೂರಪ್ಪ ತೊಡಗಿದ್ದಾರೆ.
ಇಂತಹ ಸ್ಪೀಕರ್ ಆಯ್ಕೆಗೆ ವ್ಯಕ್ತಿಗಳನ್ನು ಹುಡುಕಾಟ ನಡೆಸಿರುವ ಸಿಎಂ ಮುಂದೆ, ಎರಡು ಹೆಸರುಗಳು ಮುಖ್ಯವಾಗಿ ಕೇಳಿ ಬರುತ್ತಿದೆ. ಮೊದಲನೆಯದು ಮಾಜಿ ಸ್ಪೀಕರ್ ಭೋಪಯ್ಯ ಅವರ ಹೆಸರಾಗಿದ್ದರೇ, ಮತ್ತೊಂದು ಸುರೇಶ್ ಕುಮಾರ್ ಅವರಾಗಿದ್ದಾರೆ. ಆದರೇ ಮಾಜಿ ಸ್ಪೀಕರ್ ಭೋಪಯ್ಯ 2008ರಲ್ಲಿ ಸ್ಪೀಕರ್ ಆಗಿದ್ದಾಗ ನಡೆದುಕೊಂಡ ನಡೆ, ಅವರನ್ನು ಪಕ್ಷಪಾತಿ ಎಂಬುದಾಗಿ ರಾಜ್ಯದ ಜನತೆ ಗುರ್ತಿಸುವಂತೆ ಮಾಡಿದೆ.
ಇನ್ನೂ ಕಳೆದ 14 ತಿಂಗಳ ಹಿಂದೆ ಬಿಜೆಪಿ ರಾಜ್ಯದಲ್ಲಿ ಮೊದಲ ದೊಡ್ಡ ಪಕ್ಷದ ಸ್ಥಾವನ್ನು ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದರೂ, ಅಧಿಕಾರ ಹಿಡಿಯಲು ಆಗಲಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯೊಂದಿಗೆ ಅಧಿಕಾರ ಹಿಡಿದಾಗ, ಸ್ಪೀಕರ್ ಸ್ಥಾನಕ್ಕೆ ಮೈತ್ರಿಗಳಿಂದ ಹಿಂದಿನ ಕೆಆರ್ ರಮೇಶ್ ಕುಮಾರ್ ಅವರನ್ನೇ ಮುಂದುವರೆಸು ಇರಾದೆ ವ್ಯಕ್ತ ಪಡಿಸಿದಾಗ, ಕೇಸರಿ ಪಡೆಯಿಂದ ಸುರೇಶ್ ಕುಮಾರ್ ಅವರನ್ನು ಇಳಿಸಲು ತೀರ್ಮಾನಿಸಲಾಗಿತ್ತು. ಆದರೇ ಕೊನೆಯ ಹಂತದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹಿರಿತನ, ಅವರ ಜಾಣ್ಮೆಯಿಂದಾಗಿ ಸುರೇಶ್ ಕುಮಾರ್ ಅವರನ್ನು ಕೆಳಗಿಳಿಸಿ, ಚುನಾವಣೆಯಿಂದ ಹಿಂದೆ ಸರಿದು, ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಸ್ಪರ್ಧೆಗೆ ಇಳಿದು, ನಾಯಕರ ಮಾತಿನಂತೆ ವಾಪಾಸ್ಸುಗೊಂಡಿದ್ದ ಸುರೇಶ್ ಕುಮಾರ್ ಹೆಸರು ಕೂಡ ಎರಡನೆಯ ಸಾಲಿನಲ್ಲಿ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡುವವ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಸ್ಪೀಕರ್ ಆಗಿ ಸುರೇಶ್ ಕುಮಾರ್ ಬಿಜೆಪಿಯಿಂದ ನೇಮಕ ಮಾಡ್ತಾರಾ ಎಂಬುದು ಇದೀಗ ತೀವ್ರ ಕುತೂಹಲ ಮೂಡಿಸಿದೆ. ಆದರೇ ಎರಡೂ ಪಕ್ಷದ ನಾಯಕರನ್ನು ಬ್ಯಾಲೆನ್ಸ್ ಮಾಡುವ ಹಿರಿಯ ವ್ಯಕ್ತಿಯೊಬ್ಬರನ್ನು ಸಭಾಧ್ಯಕ್ಷರ ಸ್ಥಾನದಲ್ಲಿ ಕೂರಿಸುವ ಹುಡುಕಾಟದಲ್ಲಿ ಬಿಜೆಪಿ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ಇಬ್ಬರನ್ನೂ ಬಿಟ್ಟು, ಮೂರನೆಯವರೂ ದಿಢೀರ್ ಆಗಿ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡುವ ಇರಾದೆಯೂ ಬಿಜೆಪಿಯಲ್ಲಿ ಇದೆ. ಕಾರಣ, ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಎಲ್ಲರಿಗೂ ಒಂದೊಂದು ಅಧಿಕಾರವನ್ನು ನೀಡಿ, ತೃಪ್ತಿಗೊಳಿಸುವ ಅತ್ಯಗತ್ಯವಿದೆ. ಈ ಹಿನ್ನಲೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಮೂರನೆಯವರೊಬ್ಬರನ್ನೂ ಮಾಡುವ ಯೋಚನೆಯೂ ಇದೆ ಎನ್ನಲಾಗಿದೆ.
ಆದರೇ ಅದೇನೇ ಇರಲಿ, ಸರಳ, ಸಜ್ಜನ, ಹಿರಿಯ ಮುತ್ಸದ್ದಿ, ಸ್ಪೀಕರ್ ರಮೇಶ್ ಕುಮಾರ್ ಅಂತ ಸಭಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದವರು ಮತ್ತೊಬ್ಬರಿಲ್ಲ. ಅವರ ಹಾಸ್ಯ ಚಟಾಕಿ ಇಡೀ ಸದನ ಗಂಭೀರವಾಗಿ ಚರ್ಚೆಯಲ್ಲಿ ತೊಡಗಿದ್ದರೂ, ಕ್ಷಣಕಾಲ ಅದನ್ನು ಮರೆಸಿ, ಆಚೆಯ ಹಾಸ್ಯಲೋಕಕ್ಕೆ ಕರೆದೊಯ್ದು ಬಿಡುತ್ತಿತ್ತು. ಇಂತಹ ಸಭಾಧ್ಯಕ್ಷರ ಸ್ಥಾನಕ್ಕೆ ಬಿಜೆಪಿಯಿಂದ ಉತ್ತಮ ಹಿರಿಯ ವ್ಯಕ್ತಿಯೊಬ್ಬರು ಆಯ್ಕೆಗೊಂಡು, ಆ ಸ್ಥಾನಕ್ಕೆ ಗೌರವ ಹೆಚ್ಚಾಗಲಿ ಎಂಬುದು ಎಲ್ಲರ ಆಶಯವಾಗಿದೆ.

Comments
Post a Comment